101
ಮೊನ್ನೆ ನನ್ನ ಹೆಂಡ್ತಿ ತವರುಮನೆಯವರು ಕಡೆ ಒಬ್ಬರ ಮುಂಜಿವಿ ಇತ್ತು. ಮುಂಜಿವಿ ಮಣಿ ಗೆ ಏನ ಆಹೇರ್ ಕೊಡಬೇಕು ಅಂತ ವಿಚಾರ ಮಾಡ್ತಿದ್ದೆ. ಏನು ಕೊಡಬೇಕು ಅನ್ನೋದೆ ತಿಳಿಲಾರದಂಗ ಆಗಿತ್ತು. ನನ್ ಹೆಂಡ್ತಿ ಬಂದು ಏನ್ ಕೊಡದು ಅಂತ ವಿಚಾರ ಮಾಡಿದರೇನು ಅಂತ ಕೇಳೆ ಬಿಟ್ಟಳು. ಇನ್ನು ಏನು ಮಾಡಿಲ್ಲ ಮಾರಾಯ್ತಿ ತಡಿ ಅಂತಂದು ಹೇಳಿದೆ. ಆಯಿತು ನೀವಿ ವಿಚಾರ ಮಾಡಿ ಗಿಫ್ಟ ತರೊ ವರೆಗೂ ಉಪನಯನ ಮುಗಿದ ಹೋಗಿರತ್ತೆ ಅಂತ ಗೊಣಗಿದಳು. ಲಗೂನೆ ವಿಚಾರ ಮಾಡ್ರೀ ನಾಳೆ ಊರಿಗೆ ಹೋಗಬೇಕು ಅಂತ ರಾಗ ಬೇರೆ ಎಳೆದಳು. ನನಗೇನು ತಿಳಿಲಾರದಂಗ ಆಗಿದೆ ನೀನ ಸ್ವಲ್ಪ ವಿಚಾರ ಮಾಡಿ ಹೇಳು ಅಂತಂದೆ. ನನಗೆ ಏನು ಕೇಳಲಿಕ್ಕೆ ಹೋಗಬೇಡ್ರಿ ಸುಮ್ಮನೆ ಒಂದು ಪಾಕಿಟ್ ಒಳಗ ಐದುನೂರು ರೂಪಾಯಿ ಹಾಕಿ ಹುಡುಗನ ಕೈಯಾಗ ಕೊಟ್ಟರೆ ಆಯ್ತು ಅಂತ ಕನ್ಕ್ಲೂಜನ್ ಗೆ ಬಂದು ಬಿಟ್ಲು. ಅಲ್ಲೇ ಕುತ್ತ ನಮ್ಮಪ್ಪ ತಮ್ಮ ಕಡೆ ಇದ್ದ ಒಂದು ಪಾಕೀಟು ಅದರ ಮೇಲೆ ಒಂದು ರೂಪಾಯಿ ಅಂಟಿಸಿದ್ದ ನನ್ನ ನನಗ ಕೊಟ್ಟರು. ಇದನ್ನು ಉಪಯೋಗಿಸಿಕೊ ಅಂದರು. ಈ ಥರ ಒಂದು ರೂಪಾಯಿ ಅಂಟಿಸಿದ ಪಾಕಿಟ್ ಎಂದೂ ನೋಡಿದ್ದಿಲ್ಲ. ನಮ್ಮ ಅಪ್ಪ ಅವರಿಗೆ ಈ ಒಂದು ರೂಪಾಯಿ ಯಾಕೆ ಮ್ಯಾಲೆ ಕೊಡುತ್ತಾರೆ ಅಂತ ಸಣ್ಣ ಹುಡುಗ ನಂಗ ಪ್ರಶ್ನೆ ಕೇಳಿದೆ.
ಅವಾಗ ಅವರು ಸಿಂಗ್ ಹೇಳಿದರು ಯಾವಾಗಲೂ ಹಾವೇರಿ ಕೊಡಬೇಕು ಅಂದ್ರೆ ಸರಿ ಸಂಖ್ಯೆ ಇದ್ದ ಹಣ ಕೊಡಬಾರದು. ಅಂದ್ರೆ ಒಂದು ನೂರು, ಎರಡುನೂರು ಹಿಂಗ ಕೊಡಲಾರದ ಒಂದು ನೂರ ಒಂದು ಎರಡು ನೂರ ಒಂದು ಹಿಂಗ್ ಮ್ಯಾಲೆ ಒಂದು ಅನ್ನುವಂತ ಅಂಕಿ ಜೋಡಿಸಿ ಕೊಡತಕ್ಕದ್ದು. ಯಾಕಪ್ಪ ಅಂದ್ರೆ ಶೂನ್ಯ ಸಂಖ್ಯೆ ಮುಕ್ತಾಯ ಒಂದು ಸಂಖ್ಯೆ ಪ್ರಾರಂಭ. ಹೀಗಾಗಿ ಉಡುಗೊರೆ ಸ್ವೀಕಾರ ಮಾಡುವವರಿಗೆ ಹೊಸ ಅನುಭವ ಹೊಸ ಆಶೀರ್ವಾದ ಆಗ ಪ್ರಾರಂಭವಾಗಬೇಕೆ ಹೊರತು ಮುಕ್ತಾಯವಲ್ಲ. ಇನ್ನೊಂದು ಮಾತು ಅಂದ್ರೆ ಉಡುಗೊರೆ ಅಂದರೆ ಆಶೀರ್ವಾದ ಅದು ಯಾವಾಗಲೂ ಅವಿಭಾಜ್ಯ ವಿರಬೇಕು. ಅದಕ್ಕಾಗಿ ಶುಭ ಹಾರೈಕೆ ಒಳ್ಳೆಯ ಆರೋಗ್ಯ ಶುಭ ಶಕುನಗಳು ಅವಿಭಾಜ್ಯವಾಗಿ ಇರಬೇಕು ಅಂತೆ ಒಂದು ರೂಪಾಯಿ ಜೋಡಣೆ ಮಾಡಲೇಬೇಕ. ಇನ್ನೂ ಒಂದು ಮಾತು ಅಂತಂದ್ರೆ ಒಂದು ರೂಪಾಯಿ ಅದೊಂದು ಸಾಲದಂತೆ ಸಾಲ ಅಂದ್ರೆ ಬೇರೆ ತಿಳಿದುಕೊಳ್ಳಬೇಡಿ ಮರ್ಮ ಹೀಗಿದೆ ಹುಡುಗರೇ ಸ್ವೀಕರಿಸಿದವರು ನಮ್ಮ ಮನೆಗೆ ಬಂದು ಭೇಟಿಯಾಗಿ ಸಂಬಂಧ ಬೆಳೆಸಿಕೊಂಡು ಮತ್ತೆ ಮತ್ತೆ ಸಿಗೋಣ ಅನ್ನುವ ಸೂಚನೆ. ಈ ಒಂದು ರೂಪಾಯಿ ನಾಣ್ಯ ಲಕ್ಷ್ಮಿ ಇದ್ದ ಹಾಗೆ ಯಾಕಂದ್ರೆ ಲೋಹ ಭೂಮಿಯಿಂದ ಬಂದದ್ದು ಅದಕ್ಕೆ ಅದನ್ನು ಲಕ್ಷ್ಮಿಯ ಹೋಲಿಕೆ.
ಈ ಚಿಕ್ಕ ಪ್ರವಚನ ನನಗೆ ಕಣ್ಣು ತೆಗೆದಂತೆ ಆಯಿತು. ಹೀಗಾಗಿ ಯಾಕೆ ಇದನ್ನ ಒಂದು ಚಿಕ್ಕ ಪ್ರಬಂಧದ ಹಾಗೆ ಬರೆದು ನಿಮ್ಮ ಜೊತೆ ಹಂಚಿ ಕೊಳ್ಳಬಾರದು ಅಂತ ಈ ಎಫಬೀಗೆ ಫಾರ್ವರ್ಡ್ ಮಾಡ್ತಾ ಇದ್ದೀನಿ. ನಿಮ್ಮ ಅನಿಸಿಕೆಗಳನ್ನು ತಿಳಿಸಿ ಲಾಯಿಕ ಮಾಡಿರಿ
Comments
Post a Comment